11 Dec 2023
ಯುಜಿಸಿ ಆದೇಶದ ಅನ್ವಯ ದಿನಾಂಕ: 11-12-2023ರಂದು ಕನ್ನಡ ವಿಭಾಗವು ʼಭಾರತೀಯ ಭಾಷಾ ಉತ್ಸವʼವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹೆಸರಾಂತ ಕವಿಗಳಾದ ಶ್ರೀ ಸುಬ್ರಮಣೈ ಭಾರತಿ ಯವರ ಹುಟ್ಟಿನ ದಿನದ ಪ್ರಯುಕ್ತ ಈ ದಿನವನ್ನು ಆಚರಿಸುತ್ತಿದ್ದು, ರೇವಾ ವಿಶ್ವವಿದ್ಯಾಲಯದ ಕನ್ನಡ ವಿಭಾಗವೂ ಭಾಷೆಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸವನ್ನು ಆಯೋಜಿಸುತ್ತಿದೆ. ಪ್ರಾಧ್ಯಾಪಕರು ಮತ್ತು ಭಾಷಾ ತಜ್ಞರೂ ಆದ ಡಾ. ಬಿ.ಪ್ರಹ್ಲಾದ ರೆಡ್ಡಿಯವರು ʼಕನ್ನಡ ಭಾಷೆ ತಲೆ ಎತ್ತುವ ಬಗೆʼ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.